ಮುಖ ಪುಟ

ಶ್ರೀಮತಿ. ರುದ್ರಾಂಬ ಎಂ ಪಿ ಪ್ರಕಾಶ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೂವಿನಹಡಗಲಿಯು 2007-08ರಲ್ಲಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯದಿಂದ ಮಂಜೂರಾತಿ ಪಡೆದಿದೆ, ಹಾಗು NAAC ನಿಂದ ‘ಬಿ’ ಗ್ರೇಡ್ ಮಾನ್ಯತೆ ಪಡೆದಿದೆ. ಬಳ್ಳಾರಿ ಜಿಲ್ಲೆಯು ಕರ್ನಾಟಕದ ಮಧ್ಯಭಾಗದಲ್ಲಿದೆ; ಬಳ್ಳಾರಿ ಜಿಲ್ಲೆಯ ಪಶ್ಚಿಮ ಭಾಗದಲ್ಲಿರುವ ಹೂವಿನಹಡಗಲಿಯು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲದಿಂದಲೂ ಅನನ್ಯ ಮತ್ತು ವಿಶಿಷ್ಟವಾದ ಗುಣಲಕ್ಷಣಗಳನ್ನು ಸ್ವಾಧೀನಪಡಿಸಿಕೊಂಡಿದೆ.

ಹಡಗಲಿ ತಾಲೂಕು ಎಂಬ ಹೆಸರನ್ನು ಪ್ರಧಾನ ಪಟ್ಟಣದಿಂದ ತೆಗೆದುಕೊಳ್ಳುತ್ತದೆ. ಈ ಹೆಸರಿನ ಮೂಲದ ಬಗ್ಗೆ ಹಲವಾರು ಕಥೆಗಳು ಪರಿಚಲನೆಯಲ್ಲಿ ಇವೆ. ಗ್ರಾಮದ ಪೂರ್ಣ ಹೆಸರು ಹೂವಿನಹಹಡಗಲಿ, “ಹೂವಿನ” ಎಂದರೆ ಹೂಗಳಿಂದ ತುಂಬಿದ, “ಹಡಗಲಿ” ಎಂದರೆ ದೋಣಿ ಆದ್ದರಿಂದ ಇದು ಹೂವಿನ ದೋಣಿಯನ್ನು ಹೊಂದಿರುವ ಹಳ್ಳಿ ಎಂದು ನಂಬಲಾಗಿದೆ. ವಿಜಯನಗರ ಸಾಮ್ರಾಜ್ಯದ ದೇವಸ್ಥಾನಗಳಿಗೆ ಮತ್ತು ಅರಮನೆಗೆ ಅಗತ್ಯವಿರುವ ಹೂವುಗಳನ್ನು ಈ ಸ್ಥಳದಿಂದ ತುಂಗಭದ್ರಾ ನದಿಯಲ್ಲಿ ದೋಣಿಗಳ ಮುಖಾಂತರ ಕಳುಹಿಸಿ ಕೊಡಲಾಗುತ್ತಿತ್ತು. ಈ ಸ್ಥಳದಲ್ಲಿ ಇಂದಿಗೂ ಅಸಂಖ್ಯಾತ ಪುರಾತನ ಬಾವಿಗಳನ್ನು ಮತ್ತು ಉದ್ಯಾನಗಳನ್ನು ಕಾಣಬಹುದು. ಪ್ರಸ್ತುತ ಹೂವಿನಹಹಡಗಲಿಯು ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿ ಹೊಂದುತ್ತಿರುವ ತಾಲೂಕು ಆಗಿದೆ.

ನಮ್ಮ ಕಾಲೇಜು ಗ್ರಾಮೀಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಅಗತ್ಯಗಳನ್ನು ಪೂರೈಸುತ್ತದೆ. ನಮ್ಮ ಕಾಲೇಜಿನ ಗರಿಷ್ಠ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಿಂದ ಬಂದವರೇ ಆಗಿದ್ದಾರೆ. ಶೈಕ್ಷಣಿಕ ಉತ್ಕೃಷ್ಟತೆ ಸಾಧಿಸಲು ಮತ್ತು ವೃತ್ತಿಪರ ಕೌಶಲ್ಯಗಳನ್ನು ಖಚಿತಪಡಿಸಿಕೊಳ್ಳಲು ಯು ಜಿ ಕಾರ್ಯಕ್ರಮಗಳಿಗೆ ಉನ್ನತ ಆದ್ಯತೆ ನೀಡಲಾಗಿದೆ.

ಪ್ರಾಂಶುಪಾಲರ ನುಡಿ

ಶ್ರೀಮತಿ ರುದ್ರಾಂಬ ಎಂ ಪಿ ಪ್ರಕಾಶ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸುಸ್ವಾಗತ. ಈ ಕಾಲೇಜು ಶಿಕ್ಷಣದಲ್ಲಿ ಶ್ರೇಷ್ಠತೆಗೆ ಹೆಸರಾದ ಕಾಲೇಜಾಗಿದೆ. ಬಡ, ಗ್ರಾಮೀಣ ಮತ್ತು ಅರೆ ನಗರ ವಿದ್ಯಾರ್ಥಿಗಳಿಗೆ ರಿಯಾಯಿತಿ ಶುಲ್ಕ ರಚನೆಯೊಂದಿಗೆ ಗುಣಮಟ್ಟದ ಶಿಕ್ಷಣವನ್ನು ಆಮದು ಮಾಡಿಕೊಳ್ಳುತ್ತಿರುವ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿಯೇ ಬಹಳ ಉತ್ತಮವಾದ ಕಾಲೇಜು ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ.

ಪ್ರಸ್ತುತ ಈ ಕಾಲೇಜು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿಯೊಂದಿಗೆ ಸಂಲಗ್ನತೆ ಹೊಂದಿ ಪದವಿ ಶಿಕ್ಷಣವನ್ನು ಹೊಂದಿದೆ. 1748ರ ಒಟ್ಟು ವಿದ್ಯಾರ್ಥಿಗಳ ಸಾಮರ್ಥ್ಯಕ್ಕನುಗುಣವಾಗಿ ಕಲಾ, ವಿಜ್ಞಾನ, ವಾಣಿಜ್ಯ ಮತ್ತು ನಿರ್ವಹಣೆ ವಿಷಯಗಳಿಗೆ ನುರಿತ ಬೋಧಕ ಸಿಬ್ಬಂದಿಗಳನ್ನು ಹೊಂದಿದೆ. 2010 ರಿಂದ ಈ ಕಾಲೇಜು ಹೊಸ ವಿಷಯ ಸಂಯೊಜನೆಗಳನ್ನು ಪರಿಚಯಿಸಿದೆ ಮತ್ತು ಉತ್ತಮ ಗುಣ ಶಿಕ್ಷಣದೊಂದಿಗೆ 1700ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವಲ್ಲಿ ಯಶಸ್ವಿಯಾಗಿದೆ. ಈ ಕಾಲೇಜು ಪ್ರತಿ ಸರ್ಕಾರಿ ಯೋಜನೆಗಳನ್ನು ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ನಿಬಂಧನೆಗಳನ್ನು ರೂಪಿಸಿದೆ.

ಬಹುತೇಕ ಎಲ್ಲ ವಿದ್ಯಾರ್ಥಿಗಳು ಸಮಾಜದ ಆರ್ಥಿಕ ದುರ್ಬಲ ವಿಭಾಗದಿಂದ ಬಂದವರಾಗಿರುತ್ತಾರೆ. ಅವರ ಬೋಧನಾ ಶುಲ್ಕಗಳು ಮತ್ತು ಪ್ರಯೋಗಾಲಯ ಶುಲ್ಕಗಳನ್ನು ಕಾಲೇಜಿನಿಂದ ಮನ್ನಾ ಮಾಡಲಾಗುತ್ತದೆ. ಎಲ್ಲಾ ಸಮುದಾಯಗಳ (ಆರ್ಥಿಕವಾಗಿ ದುರ್ಬಲ) ವಿದ್ಯಾರ್ಥಿಗಳ ಬೋಧನಾ ಶುಲ್ಕಗಳು, ಪ್ರಯೋಗಾಲಯ ಶುಲ್ಕಗಳು ಮತ್ತು ಕಂಪ್ಯೂಟರ್ ಬಳಕೆಯ ಶುಲ್ಕಗಳನ್ನು ಪಾವತಿಸದಂತೆ ವಿನಾಯಿತಿ ನೀಡಲಾಗುತ್ತದೆ.

ಆರ್ಥಿಕವಾಗಿ ದುರ್ಬಲ ವಿಭಾಗದಿಂದ ಬರುವ ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಪಡೆಯುತ್ತಿದ್ದಾರೆ. ಇದರೊಂದಿಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಂಚಿ ಹೊನ್ನಮ್ಮ ವಿದ್ಯಾರ್ಥಿವೇತನ ರೂ. 2000/ – ಸರ್. ಸಿ.ವಿ. ರಾಮನ್ ರೂ. 5000 / – ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ರೂ. 4000/ – ಭಾಷಾ ವಿದ್ಯಾರ್ಥಿವೇತನ ರೂ. 500/ – ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ ವಿದ್ಯಾರ್ಥಿವೇತನ ರೂ.10,000/- ಪರಿಶಿಷ್ಟ ಜಾತಿ&ಪರಿಶಿಷ್ಟ ಪಂಗಡದ ವಿದ್ಯಾರ್ಥಿವೇತನ ರೂ.3300/- ಇವುಗಳನ್ನು ಹೊರತುಪಡಿಸಿ, ಜಿಂದಾಲ್ ಕಂಪೆನಿಯ ವಿದ್ಯಾರ್ಥಿವೇತನಗಳು, ವಿದ್ಯಾಪೋಷಕ್ , ಅಂಗವಿಕಲ ವಿದ್ಯಾರ್ಥಿವೇತನ ವಿದ್ಯಾಸಿರಿ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಇನ್ನು ಹಲವಾರು ವಿದ್ಯಾರ್ಥಿವೇತನಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ನಮ್ಮ ಕಾಲೇಜಿನಲ್ಲಿ ಪ್ರತಿ ವರ್ಷವೂ ಫಲಿತಾಂಶದ ಶೇಕಡಾವಾರು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ನಗರ ವಿದ್ಯಾರ್ಥಿಗಳೊಂದಿಗೆ ಅವಕಾಶ ಕಲ್ಪಿಸಲು, ವಿಶೇಷ ಇಂಗ್ಲೀಷ್ ತರಬೇತಿ ತರಗತಿಗಳನ್ನು ಆಯೋಜಿಸಲಾಗಿದೆ. ದ್ವಿತಿಯ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮಾನಸಿಕ, ಆರೋಗ್ಯ ಮತ್ತು ವ್ಯಕ್ತಿತ್ವ ಅಭಿವೃದ್ಧಿಗೆ “ವಿಕಸನ” ತರಗತಿಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳನ್ನು ಉದ್ಯೋಗಶೀಲರನ್ನಾಗಿ ಮಾಡಲು “ಸಹಯೋಗ ” ತರಬೇತಿಗಳನ್ನು ನೀಡಲಾಗುತ್ತದೆ. ಈ ತರಬೇತಿಗಳನ್ನು ಮಾನ್ಯತೆ ಪಡೆದ ತರಬೇತಿ ಸಂಸ್ಥೆಗಳಿಂದ ಒದಗಿಸಲಾಗುತ್ತದೆ.

ಈ ಕಾಲೇಜಿನಲ್ಲಿ ವರ್ಷವಿಡೀ ಕಾರ್ಯನಿರ್ವಹಿಸುತ್ತಿರುವ ಎರಡು ಎನ್ಎಸ್ಎಸ್ ಘಟಕಗಳು ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಆರೋಗ್ಯ ಮತ್ತು ಸ್ವಯಂ ರಕ್ಷಣಾ ತರಗತಿಗಳನ್ನು ಆಯೋಜಿಸುತ್ತವೆ. ವಾರ್ಷಿಕ ವಿಶೇಷ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಕಾಲೇಜಿನಲ್ಲಿ ರೆಡ್ ಕ್ರಾಸ್ ಯೂನಿಟ್ ರಕ್ತದಾನ ಶಿಬಿರಗಳನ್ನು ಸಂಘಟಿಸುತ್ತಿದೆ ಮತ್ತು ಪ್ರಥಮ ಚಿಕಿತ್ಸಾ ಜಾಗೃತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ಈ ಕಾಲೇಜಿನಲ್ಲಿ “ಪರಂಪರಾ ಕೂಟ”ವನ್ನು ಸ್ಥಾಪಿಸಲಾಗಿದೆ. ಈ ಘಟಕವು ಸರ್ಕಾರದ ಅನುದಾನ ರೂ. 20000/ – ದೊಂದಿಗೆ ನಮ್ಮ ಐತಿಹಾಸಿಕ ನಂಬಿಕೆಗಳನ್ನು ಉಳಿಸಲು ಪ್ರಾಚೀನತೆಯನ್ನು ಸಂರಕ್ಷಿಸಲು ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಒಂದು ಸ್ಥಳಕ್ಕೆ ವಿದ್ಯಾರ್ಥಿಗಳನ್ನು ಪ್ರತಿ ವರ್ಷ ಕರೆದುಕೊಂಡು ಹೋಗಲಾಗುತ್ತದೆ. ಪಠ್ಯೇತರ ಚಟುವಟಿಕೆಗಳ ಘಟಕವು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರುವ ಸಲುವಾಗಿ ಕಾಲೇಜಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಈ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಆಂತರಿಕ ಗುಣಮಟ್ಟ ಭರವಸಾ ಕೋಶ(ಇಂಟರ್ನಲ್ ಕ್ವಾಲಿಟಿ ಅಶ್ಯೂರೆನ್ಸ್ ಸೆಲ್)ದ ಅಡಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸಗಳನ್ನು ಆಯೋಜಿಸುವಲ್ಲಿ ಸಕ್ರಿಯವಾಗಿದೆ. ನಮ್ಮ ಕಾಲೇಜು ಮೂರು ಪ್ರಯೋಗಾಲಯಗಳನ್ನು ಹೊಂದಿದೆ, ಸಂಪೂರ್ಣ ಕ್ರಿಯಾತ್ಮಕ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪ್ರಯೋಗಾಲಯಗಳು ಹಾಗು ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ನ್ನು ಹೊಂದಿದೆ. ನಮ್ಮ ಕಾಲೇಜಿನಲ್ಲಿ ಪದವೀಧರರು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುತ್ತಿದ್ದು, ಸ್ನಾತಕೋತ್ತರ ಪದವಿ ಶಿಕ್ಷಣ ಮತ್ತು ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ B.Ed ತರಬೇತಿಯನ್ನು ಪಡೆಯುತ್ತಿದ್ದಾರೆ. ಹಾಗೂ ಕೆಲವರು ಉತ್ತಮ ಉದ್ಯೋಗಾವಕಾಶಗಳನ್ನು ಪಡೆದುಕೊಂಡು ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

22,267 ಕ್ಕಿಂತಲೂ ಹೆಚ್ಚು ಪುಸ್ತಕಗಳೊಂದಿಗೆ ಈ ಕಾಲೇಜು ಗ್ರಂಥಾಲಯವು ಸುಸಜ್ಜಿತಗೊಂಡಿದೆ . ಪ್ರತಿ ವರ್ಷ 1000 ಕ್ಕೂ ಹೆಚ್ಚು ಪುಸ್ತಕಗಳನ್ನು ಪಟ್ಟಿಗೆ ಸೇರಿಸಲಾಗುತ್ತದೆ. ನಮ್ಮ ಗೌರವಾನ್ವಿತ ಸಂಸ್ಥೆಯು ಉತ್ತಮ ನೈತಿಕ ಮೌಲ್ಯದ ಅರ್ಥದೊಂದಿಗೆ “ಅತ್ಯುತ್ತಮ ಶಿಕ್ಷಣವನ್ನು” ಒದಗಿಸುತ್ತದೆ ಎಂದು ನಾನು ಭರವಸೆ ನೀಡುತ್ತಿದ್ದೇನೆ.

ಪ್ರೊ ಶ್ರೀ ಬೂದನೂರು ಸುರೇಶ್
ಪ್ರಾಂಶುಪಾಲರು

ವಿದ್ಯಾಸಂಸ್ಥೆಯ ಬಗ್ಗೆ

ಪ್ರಾಂಶುಪಾಲರಪಟ್ಟಿ

ಕ್ರಸ ಹೆಸರುಗಳು ವರ್ಷ
1. ಶ್ರೀ ಯು. ಅಬ್ದುಲ್ ಮುತಾಲಿಬ್ 28-05-07 ರಿಂದ 01-02-2014
2. ಶ್ರೀ ಬೂದನೂರು ಸುರೇಶ್ 01-02-14 ರಿಂದ 02-07-2014
3. ಶ್ರೀ ಜಿ ಮಲ್ಲಿಕಾರ್ಜುನ 03-07-14 ರಿಂದ 04-01-2020
4. ಶ್ರೀ ಬೂದನೂರು ಸುರೇಶ್ 04-01-2020 ರಿಂದ ಪ್ರಸ್ತುತ

ಹೂವಿನಹಡಗಲಿಯು ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ತಾಲೂಕು ಕೇಂದ್ರವಾಗಿದೆ. ಇದು ತುಂಗಭದ್ರ ನದಿ ತೀರದಲ್ಲಿದೆ. ಈ ಕಾಲೇಜು ಕರ್ನಾಟಕ ಸರ್ಕಾರದಿಂದ 2007 ರ ಮೇ ತಿಂಗಳಲ್ಲಿ 78 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾಯಿತು, ಈಗ ಈ ಕಾಲೇಜಿನಲ್ಲಿ ಒಟ್ಟು 1280 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳ ಪೈಕಿ ಸುಮಾರು 65% ರಷ್ಟು ವಿದ್ಯಾರ್ಥಿನಿಯರು ದೂರದ ಪ್ರದೇಶಗಳಿಂದ ಬರುವವರಾಗಿದ್ದಾರೆ. ಈ ಕಾಲೇಜು ಕೇವಲ ಒಬ್ಬ ಪ್ರಾಂಶುಪಾಲರಿಂದ ಪ್ರಾರಂಬಿಸಲಾಯಿತು, ಇಂದು 13 ಬೋಧಕ ಸಿಬ್ಬಂದಿಗಳು ಹಾಗೂ 3 ಬೊಧಕೇತರ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ.

ಸಂಸ್ಥೆಯ ಗುರಿ ಮತ್ತು ಉದ್ದೇಶಗಳು ಕಾಲೇಜಿನ ಪ್ರವೇಶ ದ್ವಾರದಲ್ಲಿ ಪ್ರದರ್ಶಿಸಲಾಗಿದೆ. ಈ ಕಾಲೇಜು ಕಲೆ, ವಾಣಿಜ್ಯ ಮತ್ತು ವಿಜ್ಞಾನ ಮೂರು ವಿಭಾಗಗಳನ್ನು ಹೊಂದಿದೆ. ಈ ಎಲ್ಲ ಕೋರ್ಸುಗಳಿಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿಯೊಂದಿಗೆ ಸಂಲಗ್ನತೆ ಹೊಂದಿ ಸೂಚಿತ ಪಠ್ಯಕ್ರಮವನ್ನು ಅನುಸರಿಸುತ್ತಿದೆ. ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಬೋಧಕ ಸಿಬ್ಬಂದಿಗಳು ಜ್ಞಾನ ಮತ್ತು ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಕಳೆದ ಹತ್ತು ವರ್ಷಗಳಲ್ಲಿ ಹೈದರಾಬಾದ್ ಕರ್ನಾಟಕದ ಹಿಂದುಳಿದ ಪ್ರದೇಶದಲ್ಲಿ ಶ್ರೀಮತಿ ರುದ್ರಾಂಬ ಎಂ ಪಿ ಪ್ರಕಾಶ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಹೂವಿನಹಡಗಲಿಯು ಉನ್ನತ ಶಿಕ್ಷಣದಲ್ಲಿ ಅದರ ಅಸ್ತಿತ್ವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

2012-13 ಶೈಕ್ಷಣಿಕ ವರ್ಷದಲ್ಲಿ ಈ ಕಾಲೇಜಿನ ಕುಮಾರಿ ಬಿ. ಮಾಲುಂಬಿ,ಯು ಪ್ರಥಮ ಶ್ರೇಣಿಯಲ್ಲಿ, 2013-14ನೇ ಶೈಕ್ಷಣಿಕ ವರ್ಷದಲ್ಲಿ ಪಾರ್ವತಿ ಕುಪ್ಪಲ್ 8 ಶ್ರೇಣಿಯಲ್ಲಿ ಹಾಗೂ 2015-16 ಶೈಕ್ಷಣಿಕ ವರ್ಷದಲ್ಲಿ ಶಿರೀನ್ ತಾಜ್ ಹುಲ್ಗಿ 6ನೇ ಶ್ರೇಣಿಯಲ್ಲಿ ಬಳ್ಳಾರಿಯ ವಿ.ಎಸ್.ಕೆ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ, ಮತ್ತು ಕಾಲೇಜಿನ ಹೆಚ್ಚಿನ ವಿದ್ಯಾರ್ಥಿಗಳು ವಿಭಿನ್ನ ವಿಷಯಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಕಾಲೇಜು ವಿಶಾಲವಾದ ತರಗತಿ ಕೊಠಡಿಗಳು, ವಿಜ್ಞಾನ ಪ್ರಯೋಗಾಲಯಗಳು ಮುಂತಾದ ಉತ್ತಮ ಮೂಲಸೌಕರ್ಯಗಳನ್ನು ಒಳಗೊಂಡಿದೆ. ಹಾಸ್ಟೆಲ್ ನಿರ್ಮಾಣ ಹಂತದಲ್ಲಿದೆ. ಎಲ್ಲಾ ವಿಧದ ಕ್ರೀಡೆಗಳಿಗೆ ವಿಶಾಲವಾದ ಮತ್ತು ಆಟದ ಮೈದಾನವಿದೆ. ಉತ್ತಮ ವಿದ್ಯಾರ್ಹತೆಯನ್ನು ಪಡೆದ ಅರ್ಪಣಾ ಮನೋಭಾವವನ್ನು ಹೊಂದಿರುವ, ವಿದ್ಯಾರ್ಥಿಗಳನ್ನು ಬೆಂಬಲಿಸುವ ಉತ್ತಮ ಸಂಖ್ಯೆಯ ಖಾಯಂ ಹಾಗೂ ಅತಿಥಿ ಉಪನ್ಯಾಸಕರು ಇದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿಗಳ ಮತ್ತು ಸಿಬ್ಬಂದಿಗಳ ಅಗತ್ಯತೆಗಳನ್ನು ಪೂರೈಸಲು ವಿಭಿನ್ನ ವಿಷಯಗಳಲ್ಲಿ ಗುಣಮಟ್ಟದ ಅಧ್ಯಯನ(ಉಲ್ಲೇಖ) ಗ್ರಂಥಗಳನ್ನು ಕಾಲೇಜು ಗ್ರಂಥಾಲಯ ಹೊಂದಿದೆ. ಹಾಗೆಯೇ, ಸರಾಸರಿ ವಿದ್ಯಾರ್ಥಿಗಳ ಅಗತ್ಯತೆಗಳನ್ನು ಪೂರೈಸಲು ಕಾಲೇಜು ಪ್ರತಿ ವಿಭಾಗದಲ್ಲಿ ಉತ್ತಮ ನಿಯತಕಾಲಿಕಗಳ ಚಂದಾದಾರರಾಗಿದೆ.

ಈ ಕಾಲೇಜು ಸಾಂಸ್ಕೃತಿಕ ನೆಲೆಯನ್ನು ಹೊಂದಿದೆ ಮತ್ತು ಈ ನೆಲೆಗಟ್ಟಿನ ಅಡಿಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಪ್ರಾದೇಶಿಕ ಹಾಗೂ ಅಂತರ ಪ್ರಾದೇಶಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಉತ್ತಮ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ನಮ್ಮ ಕಾಲೇಜು ಉತ್ತಮ ಕ್ರೀಡಾ ಸ್ಫೂರ್ತಿಯನ್ನು ಹೊಂದಿದೆ. ಹಲವು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಮಟ್ಟ, ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಪ್ರತಿನಿಧಿಸಿದ್ದಾರೆ.

ನಮ್ಮ ಕಾಲೇಜಿನಲ್ಲಿ ಮರಗಳಿಂದ ಕೂಡಿದ ಹಸಿರು ವಾತಾವರಣವಿದೆ. ಕಾಲೇಜಿನ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲು ಬೋಧಕ ಸಿಬ್ಬಂದಿ ಬೋಧಕೇತರ ಸಿಬ್ಬಂದಿಗೆ ಪ್ರವೇಶ ಮತ್ತು ಪರೀಕ್ಷೆಯ ಸಮಯದಲ್ಲಿ ಸಹಕಾರ ನೀಡುತ್ತಾರೆ. ನಮ್ಮ ಕಾಲೇಜಿನಲ್ಲಿ ಹಲವಾರು ಸಮಿತಿಗಳು ರಚನೆಯಾಗಿವೆ. ಅವುಗಳೆಂದರೆ :

 • ಪ್ರವೇಶ ಸಮಿತಿ
 • ವಿದ್ಯಾರ್ಥಿಯ ಕಲ್ಯಾಣ ಸಮಿತಿ
 • ಎನ್ಎಸ್ಎಸ್ ಸಮಿತಿ
 • ಪರೀಕ್ಷಾ ಸಮಿತಿ
 • ಸಾಂಸ್ಕೃತಿಕ ಸಮಿತಿ
 • ಗ್ರಂಥಾಲಯ ಸಮಿತಿ
 • ಕ್ರೀಡಾ ಸಮಿತಿ
 • ವಿದ್ಯಾರ್ಥಿಗಳ ಸಲಹಾ ಸಮಿತಿ
 • ರೆಡ್ ಕ್ರಾಸ್ ಸೊಸೈಟಿ ಸಮಿತಿ
 • ಸ್ಕೌಟ್ಸ್ ಮತ್ತು ಗೈಡ್ಸ್ ಸಮಿತಿ
 • ಹೆರಿಟೇಜ್ ಕ್ಲಬ್ ಸಮಿತಿ
 • ಪರಿಶಿಷ್ಟ ಜಾತಿ/ಪಂಗಡ ಕಲ್ಯಾಣ ಸಮಿತಿ
 • ಶಿಸ್ತು ಸಮಿತಿ
 • IQAC ಸಮಿತಿ
 • NAAC ಸಮಿತಿ
 • ಮಹಿಳಾ ಕಲ್ಯಾಣ ಸಮಿತಿ

ಬೋಧಕ ಸಿಬ್ಬಂದಿಗಳು ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ. ನಮ್ಮ ಕಾಲೇಜು ಉತ್ತಮ ಅನುಭವಿ ಪ್ರಾಧ್ಯಾಪಕರುಗಳನ್ನು ಒಳಗೊಂಡಿದೆ. ಅತಿ ಹೆಚ್ಚು ಪ್ರಾಧ್ಯಾಪಕರು ಪಿ.ಹೆಚ್.ಡಿ, ಎಂ.ಫಿಲ್ ಪದವಿ ಪಡೆದವರೇ ಆಗಿದ್ದಾರೆ. ಹಾಗು ಅವರು ಸೆಮಿನಾರ್, ಪುನಶ್ಚೇತನ ತರಭೇತಿ ಆಡಳಿತಾತ್ಮಕ ತರಭೇತಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಮಾವೇಶಗಳು ಹಾಗು ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಾರೆ.

ಈ ಕಾಲೇಜು 200 ಸ್ವಯಂ ಸೇವಕರು ಹಾಗೂ ಇಬ್ಬರು ದಕ್ಷ, ಸಮರ್ಥ ಸಂಯೋಜನಾಧಿಕಾರಿಗಳನ್ನು ಒಳಗೊಂಡ ಎರಡು ಎನ್.ಎಸ್.ಎಸ್ ಘಟಕಗಳನ್ನು ಹೊಂದಿದೆ. ಈ ಘಟಕಗಳ ಮೂಲಕ, ನಮ್ಮ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ಬಹುತೇಕ ಹಿಂದುಳಿದ ಹಳ್ಳಿಗಳಲ್ಲಿ 6 ಎನ್.ಎಸ್.ಎಸ್ ಶಿಬಿರಗಳನ್ನು ನಡೆಸಲಾಗಿದೆ.

ಮುನ್ನೋಟ

ನಮ್ಮ ಕಾಲೇಜು ಗ್ರಾಮೀಣ ಯುವಕರು ಹಾಗು ಅರೆ ನಗರದ ಬಡ ವಿದ್ಯಾರ್ಥಿಗಳನ್ನು ಸವಾಲುಗಳನ್ನು ಎದುರಿಸಲು ಸಮರ್ಥರಾಗುವಂತೆ ಸಜ್ಜುಗೊಳಿಸುತ್ತಿರುವ ಉನ್ನತ ಶಿಕ್ಷಣದ ಕೇಂದ್ರವಾಗಿದೆ. ನಮ್ಮ ವಿದ್ಯಾರ್ಥಿಗಳಲ್ಲಿ ಶ್ರೇಷ್ಠ ವ್ಯಕ್ತಿತ್ವ, ಪೌರತ್ವ, ಸ್ವಯಂ ಗೌರವದ ಎಲ್ಲ ಬೆಳವಣಿಗೆಯನ್ನು ರೂಪಿಸುವುದು ಹಾಗೂ ಸಮಾಜಿಕ ಮತ್ತು ಆರ್ಥಿಕ ಅವಕಾಶಗಳನ್ನು ಪಡೆಯುವಂತೆ ಸಜ್ಜುಗೊಳಿಸುವುದಾಗಿದೆ.

ಧೇಯಗಳು

 • ನಾಯಕತ್ವದ ಗುಣ ಮತ್ತು ಸಾಮರ್ಥ್ಯವನ್ನು ಗುರುತಿಸಿ ವಿದ್ಯಾರ್ಥಿಗಳನ್ನು ಬೆಂಬಲಿಸುವುದು.
 • ಉನ್ನತ ಶಿಕ್ಷಣದಲ್ಲಿ ಸ್ವಯಂ ಮೌಲ್ಯಮಾಪನ, ಹೊಣೆಗಾರಿಕೆ, ಸ್ವಾಯತ್ತತೆ ಮತ್ತು ನಾವೀನ್ಯತೆಯನ್ನು ಪ್ರೋತ್ಸಾಹಿಸುವುದು.
 • ಗುಣಮಟ್ಟದ ಬೋಧನೆ, ಕಲಿಕೆ, ಮಾನವೀಯ ಮೌಲ್ಯಗಳು ಮತ್ತು ಉನ್ನತ ಶಿಕ್ಷಣದಲ್ಲಿನ ಸಂಶೋಧನೆಗಳಿಗೆ ಉತ್ತೇಜನ ನೀಡುವ ಮೂಲಕ ಸಂಸ್ಥೆಯಲ್ಲಿ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಲು ಪ್ರಚೋದಿಸುವುದು.
 • ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆ ಮತ್ತು ಅಭಿವೃದ್ಧಿಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು, ಸ್ಪಷ್ಟವಾಗಿ ವ್ಯಾಖ್ಯಾನಿಸಿದ ಮತ್ತು ಸ್ಪಷ್ಟಪಡಿಸಿದ ಉದ್ದೇಶಗಳನ್ನು ಸ್ಥಾಪಿಸುವುದು ಮತ್ತು ಸಂವಹನ ಮಾಡುವುದು.
 • ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಉತ್ತಮ ಮಾನವರು, ಉತ್ಪಾದಕ ಮತ್ತು ಸಾಮಾಜಿಕ ಜವಾಬ್ದಾರಿಯುತ ನಾಗರಿಕರಾಗಲು, ಶ್ರೇಷ್ಠತೆಯನ್ನು ಸಾಧಿಸಲು ನಿರ್ದಿಷ್ಟ ಸಾಮರ್ಥ್ಯ ಮತ್ತು ಮೌಲ್ಯಗಳನ್ನು ಪಡೆಯಲು ವಿದ್ಯಾರ್ಥಿಗಳನ್ನು ಸ್ಕಕ್ರಿಯಗೊಳಿಸುವುದು.

ಉದ್ದೇಶಗಳು

 • ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸುವುದು.
 • ಬಡ ಕುಟುಂಬದ ಹಿನ್ನೆಲೆಗೆ ಸೇರಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಉತ್ತಮ ಅವಕಾಶಗಳನ್ನು ಒದಗಿಸುವುದು.
 • ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಜಾಗೃತಿ, ಸ್ವಾಭಿಮಾನ, ಪ್ರಜಾಪ್ರಭುತ್ವ ಪೌರತ್ವ, ಸತ್ಯತೆ ಮತ್ತು ಸಾಮಾಜಿಕ ಅಗತ್ಯತೆಗಳ ಮೌಲ್ಯಗಳನ್ನು ಅಭಿವೃದ್ಧಿಪಡಿಸುವುದು.
 • ಸಂಶೋಧನಾ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೆ ವಿಜ್ಞಾನ ವಿದ್ಯಾರ್ಥಿಗಳನ್ನು ಒದಗಿಸುವುದು.
 • ಜಾಗತೀಕರಣದ ಹಿನ್ನೆಲೆಯಲ್ಲಿ ವೇಗವಾಗಿ ಬದಲಾಗುತ್ತಿರುವ ಸಾಮಾಜಿಕ-ರಾಜಕೀಯ ಆರ್ಥಿಕ ಸನ್ನಿವೇಶಕ್ಕೆ ಅನುಗುಣವಾಗಿ ಇಂಗ್ಲೀಷ್ ಅಭಿವ್ಯಕ್ತಿ ಕೌಶಲ್ಯಗಳನ್ನು ಕಲಿಸಲು ಉನ್ನತ ಆದ್ಯತೆ ನೀಡುವುದು.

ಆಡಳಿತಾತ್ಮಕ ವಿಭಾಗ

ಪ್ರವೇಶಾತಿ, ಫಲಿತಾಂಶ, ಮೂಲಸೌಕರ್ಯ ಮತ್ತು ಸಿಬ್ಬಂದಿಗಳ ಸಂಖ್ಯೆಯ ಬಲದಿಂದ ನಮ್ಮ ಕಾಲೇಜಿನ ಶಕ್ತಿಗೆ ಹೆಚ್ಚಿದೆ. ಈ ಕಾಲೇಜು ಇಂದು 3 ಬೋಧಕೇತರ ಸಿಬ್ಬಂದಿಗಳನ್ನು ಹೊಂದಿದೆ. ಅವರು ಉತ್ತಮ ವಿದ್ಯಾರ್ಹತೆ ಹೊಂದಿದ, ಸಮರ್ಥ, ಸಮರ್ಪಿತ ಮನೋಭಾವದ ಮತ್ತು ಕಾಲೇಜಿನ ಗುರಿ ಮತ್ತು ಉದ್ದೇಶಗಳನ್ನು ಸಾಧಿಸುವ ಕಡೆಗೆ ಕೆಲಸ ಮಾಡುತ್ತಿದ್ದಾರೆ.

ಶ್ರೀ ಬೂದನೂರು ಸುರೇಶ್

ಪ್ರಾಂಶುಪಾಲರು

ಎಂ.ಕಾಂ
ಎಂ.ಫಿಲ್

ಶ್ರೀಮತಿ ನಿರ್ಮಲ ಹೆಚ್

ಟೈಪಿಸ್ಟ್

ಎಂ.ಲಿ.ಎಸ್.ಸಿ,
ಕನ್ನಡ ಟೈಪಿಂಗ್

ಶ್ರೀ ಕೊಟ್ರೇಶ್ ಜಿ

ದ್ವಿತೀಯ ದರ್ಜೆ ಸಹಾಯಕರು

ಭೋಧಕ ಸಿಬ್ಬಂದಿ

ಪ್ರವೇಶಾತಿ, ಫಲಿತಾಂಶ, ಮೂಲಸೌಕರ್ಯ ಮತ್ತು ಸಿಬ್ಬಂದಿಗಳ ಸಂಖ್ಯೆಯ ಬಲದಿಂದ ನಮ್ಮ ಕಾಲೇಜಿನ ಶಕ್ತಿ ಹೆಚ್ಚಿದೆ. ಇಂದು ನಮ್ಮ ಕಾಲೇಜಿನಲ್ಲ 12 ಖಾಯಂ ಬೋಧಕ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಉತ್ತಮ ವಿದ್ಯಾರ್ಹತೆ ಹೊಂದಿದ, ಸಮರ್ಥ, ಸಮರ್ಪಿತ ಮನೋಭಾವದ ಕಾಲೇಜಿನ ಗುರಿ ಮತ್ತು ಉದ್ದೇಶಗಳನ್ನು ಸಾಧಿಸುವ ಕಡೆಗೆ ಕೆಲಸ ಮಾಡುತ್ತಿದ್ದಾರೆ.

ಡಾ. ಕೆ. ಸತೀಶ್

ಇತಿಹಾಸ ವಿಭಾಗ

ಎಂ.ಎ
ಪಿ.ಹೆಚ್.ಡಿ

ಶ್ರೀ ಜಗದೀಶ ಆಲದಕಟ್ಟಿ

ವಾಣಿಜ್ಯ ವಿಭಾಗ

ಎಂ.ಕಾಂ
ಎಂ.ಫಿಲ್

ಶ್ರೀ.ರಮೇಶ್. ಎನ್

ಇಂಗ್ಲೀಷ್ ವಿಭಾಗ

ಎಂ.ಎ
ಎಂ.ಫಿಲ್

ಶ್ರೀಮತಿ ಉಮಾ ಸಿ ಕೊಳ್ಳಿ

ಗಣಿತಶಾಸ್ತ್ರ ವಿಭಾಗ

ಎಂ.ಎಸ್.ಸಿ
ಎಂ.ಫಿಲ್

ಶ್ರೀ ಗಂಟೆಪ್ಪ ಶೆಟ್ಟಿ

ಅರ್ಥಶಾಸ್ತ್ರ ವಿಭಾಗ

ಎಂ.ಎ
ಎಂ.ಫಿಲ್

ಶ್ರೀ ಬಸವರಾಜ್ ಹೆಚ್

ಕನ್ನಡ ವಿಭಾಗ

ಎಂ.ಎ
ಎಂ.ಫಿಲ್

ಶ್ರೀ ಕೊಟ್ರೇಶಿ ಹೆಚ್

ದೈಹಿಕ ಶಿಕ್ಷಣ ವಿಭಾಗ

ಎಂ.ಪಿ. ಇಡಿ
ಎಂ.ಫಿಲ್

ಶ್ರೀಮತಿ ಉಮಾದೇವಿ ಜಿ ಟಿ

ಕನ್ನಡ ವಿಭಾಗ

ಎಂ.ಎ
ಎನ್.ಇ.ಟಿ

ಶ್ರೀ ಮಾರಯ್ಯ ಎಂ

ಕನ್ನಡ ವಿಭಾಗ

ಎಂ.ಎ, ಎನ್.ಇ.ಟಿ,
ಬಿ.ಎಡ್, ಟಿ.ಇ.ಟಿ

ಡಾ. ಏಟುಕೂರಿ ದೊರಬಾಬು

ರಸಾಯನಶಾಸ್ತ್ರ ವಿಭಾಗ

ಎಂ.ಎಸ್.ಸಿ, ಪಿ.ಹೆಚ್.ಡಿ,
ಎನ್.ಇ.ಟಿ, ಕೆ.ಎಸ್.ಇ.ಟಿ, ಗೇಟ್

ಡಾ. ಮುರುಗೇಶ್ ಟಿ.ಎಂ

ವಾಣಿಜ್ಯ ವಿಭಾಗ

ಎಂ.ಕಾಂ
ಪಿ.ಹೆಚ್.ಡಿ

ವಿಷಯಗಳು

ಕಾಲೇಜಿನಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರದ ಮೂರು ವರ್ಷಗಳ ಪದವಿ ಶಿಕ್ಷಣದ ಕೋರ್ಸುಗಳನ್ನು ನೀಡಲಾಗಿದೆ. ವಿ.ಎಸ್.ಕೆ ವಿಶ್ವವಿದ್ಯಾಲಯ, ಬಳ್ಳಾರಿಯೊಂದಿಗೆ ಸಂಲಗ್ನತೆ ಹೊಂದಿದೆ

ಭಾಗ -1 ಭಾಷೆಗಳು: 1. ಕನ್ನಡ 2. ಇಂಗ್ಲಿಷ್

ಭಾಗ II ಐಚ್ಛಿಕ ವಿಷಯಗಳು

ವರದಿಗಳು

AQAR 2017-18

ಚಿತ್ರ-ಸಂಪುಟ

ನಮ್ಮನು ಸಂಪರ್ಕಿಸಿ